ಶ್ರೀರಾಮಾಯಣ ಹಕ್ಕಿನೋಟ -೧೦೫ A Bird's-eye view of Ramayana : 105

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೦೫


ಪ್ರಶ್ನೆಗಳು ಹುಟ್ಟತೊಡಗಿದರೆ ಕಡಲಲೆಗಳಂತೆ! ಒಂದರ ಮೇಲೊಂದು! ಸಣ್ಣ ದೊಡ್ಡ,ಪ್ರಶ್ನೆ ಉಪಪ್ರಶ್ನೆ!! ಒಂದು ಉತ್ತರ ಮತ್ತೊಂದು ಪ್ರಶ್ನೆಗೆ ದಾರಿ ಮಾಡಿಕೊಡುತ್ತದೆ.

ಸೀತೆಯ ವಿಷಯದಲ್ಲೂ ಹಾಗೇ ಆಯಿತು.ಅದೂ ಉತ್ತರಿಸುವ ವಿಶ್ವಾಸದ ವ್ಯಕ್ತಿ ಸಿಕ್ಕಿದರೆ ಕೊನೆಮೊದಲಿಲ್ಲದ ಪ್ರಶ್ನೆ-ಸಂಶಯಗಳು!! 

ರಾಮ ಲಕ್ಷ್ಮಣರ ಯೋಗ ಕ್ಷೇಮ,

ತನ್ನನ್ನಗಲಿದ ಬಳಿಕ ಆದ ಘಟನೆಗಳು-

ಎಲ್ಲಾ ತಿಳಿದ ಬಳಿಕ ಸೀತೆಗೆ ಇನ್ನೂ ಪ್ರಶ್ನೆಗಳು! ಸಂದೇಹಗಳು!

.ರಾಮನು ನನಗಾಗಿ ವ್ಯಥೆ ಪಡುತ್ತಿಲ್ಲವೇ?

. ರಾಮನು ಮುಂದೆ ಮಾಡಬೇಕಾದ ಪುರುಷ ಪ್ರಯತ್ನಗಳನ್ನು ಮಾಡುತ್ತಿರುವನಲ್ಲವೇ?

.ಮಿತ್ರ-ಅಮಿತ್ರರ ವಿಷಯದಲ್ಲಿ ಜಾಗ್ರತನಾಗಿರುವನಲ್ಲವೇ?

.ದೇವತೆಗಳ ಅನುಗ್ರಹ ಬಯಸುತ್ತಿರುವನಲ್ಲವೇ?

.ನಾನು ದೂರದಲ್ಲಿರುವ ಕಾರಣ ನನ್ನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ ತಾನೇ?

.ಅತಿಯಾದ ದುಃಖದಿಂದ ಕೃಶನಾಗಿರುವನೇ?

.ಈ ದುಃಖದಿಂದ ನನ್ನನ್ನು ಪಾರುಮಾಡುವನೇ?

.ಭರತನು ನನ್ನ ರಕ್ಷಣೆಗೆ ಸೇನೆಯನ್ನು ಕಳಿಸಿಯಾನೇ?

. ಲಕ್ಷ್ಮಣನು ತನ್ನ ಶೌರ್ಯದಿಂದ ರಕ್ಕಸರನ್ನು ಧ್ವಂಸ ಮಾಡಿಯಾನೇ?

. ಆದಷ್ಟು ಬೇಗನೆ ರಾಮ ಬಾಣದಿಂದ ರಾವಣನು ಸಾಯುವುದನ್ನು ನಾನು ಕಾಣುವೆನೇ? ಓಹ್!!

... ನೂರಾರು ಪ್ರಶ್ನೆಗಳು!

ಪಾssಪ, ಸೀತೆ,

ಸೀತಾದೇವಿ,

ಸೀತಾಮಾತೆ!! ಅವಳ ಮನಸ್ಸಿನ ಸ್ಥಿತಿ ನೋಡಿ ಹನುಮ ಮರುಕಗೊಂಡ.

ಆಕೆಯ ಎಲ್ಲಾ ಪ್ರಶ್ನೆಗಳಿಗೆ ಆಕೆ ಮೆಚ್ಚುವ ರೀತಿಯಲ್ಲಿ ಉತ್ತರಿಸಿದ.

ಕೊನೆಗೆ-ನನ್ನ ಮಾತುಗಳನ್ನು ಕೇಳುತ್ತಲೇ ಶ್ರೀರಾಮನು ಕಪಿ-ಕರಡಿಗಳಿಂದ ಕೂಡಿರುವ ಮಹಾಸೈನ್ಯದೊಂದಿಗೆ ಇಲ್ಲಿಗೆ ಬಂದು ಶತ್ರು ಸಂಹಾರ ಮಾಡಿ ನಿನ್ನನ್ನು ಬಿಡಿಸಿಕೊಂಡು ಹೋಗುತ್ತಾನೆ- ಎಂಬ ವಿಶ್ವಾಸದ ಮಾತುಗಳನ್ನು  ಹೇಳಿದನು.

ಆಗ ಸೀತೆಯು ಹನುಮನಿಗೆ ಶ್ರೀರಾಮನನ್ನು ಬೇಗನೇ ಕರೆತರಲು ಹೇಳಿದಳು.

ಆಗ ಹನುಮನು ನನ್ನ ಜೊತೆಯಲ್ಲಿ ನೀನೂ ಬಾ ತಾಯಿ ಎಂದು ಕರೆದನು.ನಿನ್ನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಶ್ರೀರಾಮನೊಂದಿಗೆ ಸೇರಿಸುವೆ ಎಂದನು.


ಅದಕ್ಕೆ ಸೀತೆ ಕೊಟ್ಟ ಉತ್ತರ ಅವಳ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ!





Om ShriRamaya Namaha : 105


A Bird's-eye view of Ramayana : 105


It's like the waves of the sea, if questions begin to arise ! A tiny ,a big question and a sub question !! .

The answer of a question makes way for another question. The same happened for Seetha too. That too, when the person who answers is found ,then there will be no limitations for the questions and doubts !!Even after learning everything about the well beings of Rama - Lakshmana, the incidents that took place after Rama departing from her, still she was filled with speculations and doubts !


The doubts of Seetha :

• Is Rama not bothering about me ?

• Is Rama trying everything which are supposed to be done ?

• Is he careful about a friend and a foe ?

• Is he wishing for the grace of the Gods ?

• Has the love of Rama towards me waned since I am far from him ?

• Has he become too weak due to extreme grief ?

• Will he save me from this grief and sorrow ?

• Will Bharatha send army for my rescue  ?

• Will Lakshmana annihilate the monsters with his valor ?

• Will I witness Ravana being killed with the arrow of Rama soon ?

Hundreds of questions ! 

The poor ,Seetha ,Seethadevi ,

Seethamaatha  !!

Hanuman pittied seing the plight of Seetha. Hanuman answered all the questions asked by Seetha in a way that Seetha could appreciate him . At last he said that ShriRama would come along with the great and huge army consisting of monkeys and bears the moment he would hear  about Seetha by Hanuman. And he assured her that ShreeRama would liberate her from Ravana and take her with him.

During the time Seetha asked Hanuman to bring Rama soon.

Hanuman asked Seetha to come along with him and assured her that he would take her to Rama safely. 

But the answer that Seetha gave to Hanuman mirrors the personality of Seetha !



No comments:

Post a Comment

Please leave your comments here.....