ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೧೦೪
ಹನುಮ ಮರದಿಂದ ಕೆಳಗಿಳಿದ.
ಸೀತಾದೇವಿಯ ಬಳಿಗೆ ಬಂದು ಎರಡು ಕೈಗಳನ್ನೂ ತಲೆಯ ಮೇಲಿಟ್ಟುಕೊಂಡು ಕೈಮುಗಿದು ಮಧುರವಾದ ನುಡಿಗಳಿಂದ-
ಉತ್ತಮ ಸ್ತ್ರೀತ್ವವನ್ನು ಸೂಚಿಸುವ, ಶುಭಲಕ್ಷಣಗಳನ್ನು ಹೊಂದಿರುವ ನೀನು ಜನಸ್ಥಾನದಲ್ಲಿ ರಾವಣನಿಂದ ಬಲಾತ್ಕಾರವಾಗಿ ಅಪಹರಿಸಲ್ಪಟ್ಟ ಸೀತಾದೇವಿಯೇ ಆಗಿದ್ದರೆ ನಿನಗೆ ಮಂಗಳವಾಗಲಿ.
ನಿಶ್ಚಯವಾಗಿಯೂ ನೀನು ಶ್ರೀರಾಮ ಸತಿ ಸೀತೆಯೇ ಆಗಿರುವೆಯಲ್ಲವೇ?- ಎಂದು ಕೇಳಿದನು.
ಇಬ್ಬರಿಗೂ ಸಂಶಯ!
ಅದು ನಿವಾರಣೆಯಾಗುವ ಹೊತ್ತೂ ಬಂತು! ಸಂಶಯ ನಿವಾರಣೆಯಾಗಿ ಪರಮ ಹರ್ಷಿತ ಸೀತೆ-
ನಾನು ದಶರಥನ ಸೊಸೆ,
ಜನಕನ ಮಗಳು,
ಸೀತಾ ಹೆಸರಿನ ಶ್ರೀರಾಮನ ಸತಿ- ಎಂದಳು.
ಬಳಿಕ ಹಂತಹಂತವಾಗಿ ನಡೆದ-
.ಹನ್ನೆರಡು ವರ್ಷಗಳ ಕಾಲ
ಶ್ರೀರಾಮನರಮನೆಯಲ್ಲಿ ಸುಖವಾಗಿದ್ದೆ
. ಹದಿಮೂರನೆಯ ವರ್ಷದಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕವೆಂದಾಗ ಕೈಕೇಯಿಯ ವರಗಳಿಂದಾಗಿ ಸತ್ಯವ್ರತ ರಾಮನ ವನವಾಸ
. ಅವನೊಡನೆ ನಾನು, ರಾಮ ಪ್ರಿಯ ಲಕ್ಷ್ಮಣನ ಸಹವಾಸ
. ದಂಡಕಾರಣ್ಯದಲ್ಲಿದ್ದಾಗ ದುರುಳ ರಾವಣನಿಂದ ಅಪಹರಣ,
.ಇನ್ನೆರಡೇ ತಿಂಗಳ ಜೀವನ...
ಇಷ್ಟನ್ನು ಚುಟುಕಾಗಿ ಹೇಳಿದಳು.
ಆದರೂ ಸೀತೆಗೆ ಸಂದೇಹ!
ಕಪಿವೇಷದ ರಾವಣನಿರಬಹುದೇ? ಎಂದು.
ಆಗ ಹನುಮನೇ ಸೀತೆಯ ಶಂಕೆಯನ್ನು ದೂರಮಾಡಲು
ನಡೆದ ಎಲ್ಲಾ ಘಟನೆಗಳನ್ನು
( ಸೀತಾಪಹರಣ,ರಾಮ-ಲಕ್ಷ್ಮಣರೊಡನೆ ತನ್ನ ಮೂಲಕ ಸುಗ್ರೀವನ ಗೆಳೆತನ,
ಆಭರಣಗಳನ್ನು ಕೊಟ್ಟಿದ್ದು,
ರಾಮ ಪ್ರಲಾಪ,ವಾಲಿವಧೆ, ಸುಗ್ರೀವನ ಪಟ್ಟಾಭಿಷೇಕ, ಹುಡುಕಾಟ,
ಪ್ರಾಯೋಪವೇಶಕ್ಕೆ ನಿರ್ಧಾರ,
ಸಂಪಾತಿ ದರ್ಶನ...) ರಾಮ ಲಕ್ಷ್ಮಣರ ರೂಪ ಲಾವಣ್ಯಗಳನ್ನು,
ಗುಣ ವಿಶೇಷಗಳನ್ನು ವಿವರಿಸಿದನು.
ಅವರ ಕ್ಷೇಮ ಸಮಾಚಾರವನ್ನೂ ಹೇಳಿದನು.
ತನ್ನ ಜನ್ಮ ವೃತ್ತಾಂತ ದೊಂದಿಗೆ ತನ್ನ ಪರಿಚಯವನ್ನೂ ಹೇಳಿದನು!
ಬಳಿಕ ರಾಮನು ತನಗಿತ್ತ,
ತಾನು ಜೋಪಾನವಾಗಿ ತಂದಿದ್ದ,
ಸೀತೆ ನಂಬಬಹುದಾದ ಕಟ್ಟಕಡೆಯ ಆಧಾರವಾದ, ಮುದ್ರೆಯುಂಗುರವನ್ನು ಸೀತೆಗೆ ನೀಡಿದನು.
ಸೀತೆ ನಂಬಿದಳು!
ಹನುಮನ ಸಾಹಸವನ್ನು ಮನಸಾರೆ ಕೊಂಡಾಡಿದಳು.
ಹರಸಿದಳು.
ಮುದ್ರೆಯುಂಗುರವನ್ನು ಕಂಡು ರಾಮನನ್ನು ಕಂಡಷ್ಟೇ ಸಂತೋಷಗೊಂಡಳು!
ಗ್ರಹಣ ಮುಕ್ತ ಚಂದ್ರನಂತೆ ಕಂಗೊಳಿಸಿದಳು!

Om ShriRamaya Namaha : 104
A Bird's-eye view of Ramayana : 104
Hanuman climbed down the tree.
He came near Seetha by placing his both the hands on the head and then folded his hand and bowed down with all the respect. He says to her with pleasing words -
"May god bless you, if you are Seethadevi ,who symbolizes the finest qualities of a woman ,possess auspicious attributes and who have been abducted by Raavana from Janasthana ".
He asked her - "Are you the wife of ShreeRama for sure ?".
Both of them were filled with doubts ! It was the time for things to get clarified !
Seetha was extremely happy when her doubts got clarified and said that -
She was the daughter in law of Dasharatha.
The daughter of Janaka.
She was Seetha, the wife of ShreeRama .
Later she said everything that had happened step by step -
• She spent 12 years with Rama in his palace happily.
• When Rama was about to get coronated in 13th year ,he was made to go into the exile who had been following truth, due to the boons of Kaikeyee.
• Lakshmana and she accompanied Rama.
• Abduction by the sinful Raavana when they were in Dandakaaranya.
• The life was only for 2 months ...
She narrated all the above mentioned incidents to Hanuman briefly.
But still Seetha was suspicious !
She suspected that Ravana might have come to her by disguising himself as Hanuman. During the time Hanuman himself narrated all the incidents that had happened so far which included the incidents of,
( the abduction of Seetha,the friendship of Rama - Lakshmana with Sugreeva through Hanuman, about giving the jewellery, the grief of Rama, the slaying of Vaali, the coronation of Sugreeva, the quest, decision of fasting unto death, the arrival of Sampaathi...). He described the appearance, elegance and attributes of Rama and Lakshmana. He told her about their well-beings too. Along with introducing himself he also told her about his birth !
Later he gave her the imprinted ring that was given by Rama and it had been protected by Hanuman for a long time. It was the only last proof that Seetha could believe on .
Finally Seetha believed !
She praised the adventures of Hanuman from the bottom of her heart and blessed him.
There was no boundary for the happiness of Seetha when she saw the imprinted ring. She felt happy by seeing the ring as if she had seen Rama himself.
Seetha sparkled as the moon which was liberated from the eclipse.
No comments:
Post a Comment
Please leave your comments here.....