ಶ್ರೀರಾಮಾಯಣ ಹಕ್ಕಿನೋಟ -೧೪೦ A Bird's-eye view of Ramayana : 140

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೪೦


ಮಸಣ ವೈರಾಗ್ಯದಂತೆ ಮರಣ ವೈರಾಗ್ಯ.ರಾವಣನ ಪಾಲಿಗೆ ಇದು ಹೌದು ಎನಿಸುತ್ತದೆ. ತನ್ನ ಆತ್ಮೀಯರು ಯುದ್ಧದಲ್ಲಿ ಸತ್ತಾಗ ಅವನಿಗೆ ತಾನು ಮಾಡಿದ ತಪ್ಪುಗಳು ಕಣ್ಣೆದುರು ಬರುತ್ತವೆ.ಪಶ್ಚಾತ್ತಾಪ ಪಡುತ್ತಾನೆ.ಆದರೆ....ಮತ್ತೆ ಅದೇ 'ನಾಯಿಬಾಲ...'

ಇಲ್ಲೂ ಹಾಗೆಯೇ ಆಯಿತು. ಮಗಂದಿರಾದ ತ್ರಿಶಿರ,

ದೇವಾಂತಕ-ನರಾಂತಕರು ವಾನರ ಸೇನೆಯನ್ನೆದುರಿಸುವ ತನಕ ಅಜೇಯರು.

ಆ ವಿಶ್ವಾಸದಿಂದ ರಾವಣನನ್ನು ಗೆಲ್ಲಿಸಲು ಯುದ್ಧಕ್ಕೆ ಅವರು ಹೊರಟರು.ಅವರೊಂದಿಗೆ ರಾವಣನ ಸಹೋದರರಾದ ಮಹಾಪಾರ್ಶ್ವ ಮಹೋದರರೂ ಸೇರಿದರು. ಮಹಾವೀರ ಅತಿಕಾಯನೂ ಜೊತೆಗೂಡಿದ.



ಎಲ್ಲರೂ 'ಮಾಡು ಇಲ್ಲವೇ ಮಡಿ' ತತ್ತ್ವದಲ್ಲಿ ಯುದ್ಧಾರಂಭ ಮಾಡಿದರು.ಆದರೆ ಅವರ ಪಾಲಿಗೆ ಮಡಿಯುವುದೇ ಬಂತು!ಸುರುಸುರುವಿಗೆ ಇವರ ಶಸ್ತ್ರಗಳು ಕೆಲಸ ಮಾಡಿದರೂ   ಕೊನೆಕೊನೆಗೆ ವಾನರರ ಕಲ್ಲು ಬಂಡೆಗಳಿಗೆ ಇವರು ಬಲಿಯಾಗಬೇಕಾಗಿ ಬಂತು!•ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ನರಾಂತಕನನ್ನು  ಅಂಗದನು ಬಲಿ ತೆಗೆದುಕೊಂಡನು.

•ದೇವಾಂತಕನು ಹನುಮನಿಗೆ ತುತ್ತಾದ. 

•ನೀಲನ ಮೇಲೆ ಆಕ್ರಮಿಸಿದ ಮಹೋದರನು ನೀಲನಿಗೇ ಬಲಿಯಾದರೆ 

•ಹನುಮನು ತ್ರಿಶಿರನ ಖಡ್ಗದಿಂದಲೇ ಅವನ ಮೂರೂ ತಲೆಗಳನ್ನು ಚೆಂಡಾಡಿದನು.

•ಈ ನಾಲ್ವರ ಸಾವಿನಿಂದ ರೊಚ್ಚಿಗೆದ್ದ ಮಹಾಪಾರ್ಶ್ವನು ಗದೆಯನ್ನೆತ್ತಿಕೊಂಡು ವಾನರ ಸಂಹಾರಕ್ಕೆ ಮುಂದಾದನು.ಆಗ ವಾನರೇಶ್ವರನಾದ ಋಷಭನು ಅವನನ್ನೆದುರಿಸಿ ಒಂದಷ್ಟು ಸೆಣಸಾಟದ ಬಳಿಕ ಅವನ ಗದೆಯಿಂದಲೇ ಅವನನ್ನು ಸಂಹರಿಸಿದನು.


ತನ್ನ ಸೋದರರು- ಚಿಕ್ಕಪ್ಪಂದಿರು ಸಾವಿಗೀಡಾದುದನ್ನು ಕಂಡ ರಾವಣನ ಪತ್ನಿ ಧಾನ್ಯಮಾಲಿನಿಯ ವೀರ ಪುತ್ರ  ಅತಿಕಾಯನು ವಾನರವೀರರನ್ನೆದುರಿಸಲು ತೊಡಗಿದನು.ಮತ್ತೊಬ್ಬ ಕುಂಭಕರ್ಣನೋ ಎನ್ನುವ ರೀತಿಯಲ್ಲಿ ಅವನು ವಾನರವೀರರನ್ನು ಸಾಯಬಡಿಯ ತೊಡಗಿದನು.ಸಾವಿರ ಕುದುರೆಗಳನ್ನು ಹೂಡಿರುವ ರಥದಲ್ಲಿ ಕುಳಿತು ಅವನು ಯುದ್ಧ ಮಾಡುತ್ತಿದ್ದನು.

ತೇಜಸ್ವಿ. ಶೂರ,ಧೀರ.

ಸಹಜವಾಗಿಯೇ ರಾಮನ ಗಮನವನ್ನು ಸೆಳೆದನು. ಮಹಾತಪಸ್ಸಿನಿಂದ ಅವನು ಬ್ರಹ್ಮನನ್ನೊಲಿಸಿ ಅನೇಕ ಅಸ್ತ್ರಗಳನ್ನು ಪಡೆದವನು.

ಇವನನ್ನೆದುರಿಸಲು ಲಕ್ಷ್ಮಣನು ಅಣ್ಣನ ಅನುಮತಿ ಆಶೀರ್ವಾದಗಳನ್ನು ಪಡೆದು ತಾನೇ ಮೊದಲಾಗಿ ಹೊರಟನು. ಅತಿಕಾಯನು ಲಕ್ಷ್ಮಣನನ್ನು ಕೀಳಂದಾಜಿನಿಂದ ಬಾಲಕನೆಂದು ಭಾವಿಸಿ ದೂರ ಸರಿಯಲು ಹೇಳಿದ. ಆದರೆ ಲಕ್ಷ್ಮಣನು ಅವನಲ್ಲಿ ಶೂರತ್ವವನ್ನು ತೋರಲು ಹೇಳಿ ಯುದ್ಧಕ್ಕೆ ತೊಡಗಿದನು.ಸ್ವಲ್ಪ ಹೊತ್ತಿನಲ್ಲಿ ಅತಿಕಾಯನಿಗೆ ಲಕ್ಷ್ಮಣನು ಅಸಾಮಾನ್ಯ ವೀರನೆಂಬುದು ಅರಿವಿಗೆ ಬಂತು. 


ಇಬ್ಬರೂ ಸಮಬಲದಲ್ಲಿ ಹೋರಾಡಿದರು.ಆಗ ವಾಯದೇವನು ಲಕ್ಷ್ಮಣನ ಬಳಿಗೆ ಬಂದು -ಅತಿಕಾಯನಲ್ಲಿ ಅಭೇದ್ಯವಾದ ಕವಚವಿರುವುದರಿಂದ ಸಾಮಾನ್ಯ ಅಸ್ತ್ರಗಳು ಅವನನ್ನು ವಧಿಸವು.

ಬ್ರಹ್ಮಾಸ್ತ್ರವನ್ನು ಪ್ರಯೋಗಿಸು-ಎಂದು ಸಲಹೆಯಿತ್ತನು.ಲಕ್ಷ್ಮಣನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಅತಿಕಾಯನು ಅದನ್ನು ತನ್ನಲ್ಲಿರುವ ಯಾವುದೇ ಅಸ್ತ್ರಗಳಿಂದ ತಡೆಯಲಾರದಾದನು.ಲಕ್ಷ್ಮಣನ ಬಾಣವು ಅತಿಕಾಯನ ಶಿರವನ್ನು ಕತ್ತರಿಸಿತು.ವೀರ ಅತಿಕಾಯನ ಅಂತ್ಯವಾಯಿತು.


ವಿಶ್ವ



Om ShriRamaya Namaha : 140


A Bird's-eye view of Ramayana : 140


The saying " Masana Vairagyadanthe Marana Vairaagya " (which means as the renunciation of graveyard, the renunciation of death) proves true in the case of Ravana. When his own people who were close to him die in the war, he realizes his mistakes and wrong deeds. He regrets.  But ....again as 'the tail of a dog ...' the same happened even here. His sons Trishira, Devaanthaka and Naraanthaka were unbeatable only till they confronted the army of the apes. With that hopes they went to the war to bring victory to Ravana in the battle. The brothers of Ravana Mahaapaarshwa and Mahodara joined along with them. The great valiant Atikaaya too joined them. 


Everyone began the war on the principle ' Do or Die ' . But they were left with only death ! Though their artilleries worked in favor of them in the beginning, eventually they had to become the victim of the stones and boulders which were thrown by the apes ! Angada killed Naraanthaka who was marching forward dangerously. 

• Devaanthaka was slayed by Hanuman. 

• Mahodara who attacked Neela, was killed by Neela himself. 

• Hanuman cut off the three heads of Trishira with Trishira's sword itself. 

• Mahaapaarshwa who was outraged by the death of those four, marched forward to annihilate the apes with the club. During the time ,the lord of the apes Rushaba confronted him and after struggling for a while with him, Rushabha killed him with his club itself. 


Athikaaya the valiant son of Ravana's wife Dhaanyamaalini, who witnessed the deaths of his siblings and uncles, went to confront the monkeys. As if an another Kumbhakarna he began to kill the monkey warriors. He was fighting sitting in the chariot which had 1000 horses .

The radiant. The courageous, the Valiant. 

He drew the attention of Rama naturally. 

He was the one who had obtained various artilleries by pleasing Brahma through his ardent penance. 

To confront him, Lakshmana went first by taking the consent and blessings of his brother Rama. Athikaaya commanded Lakshmana to move aside by assuming and condemning him a boy . But Lakshmana got ready for the war by challenging him to show his valor. In a very short time, Athikaaya realized that Lakshmana was a peerless valiant. 



Both fought with an equal force. During the time, the lord Vaayu came and said to Lakshmana that the ordinary artilleries would not slay Athikaaya since he possessed an impregnable armour. 

And adviced him to try out the artillery ' Brahmaastra ' on him. As he said, Lakshmana tried out 'Brahmaastra '. Athikaaya could not prevent Brahmaastra from any of his artilleries. The arrow of Lakshmana cut the head off of Athikaaya. The valiant Athikaaya got terminated. 


Kannada version of the story is written by- 

Shri U S Vishweshwara Bhat 

Translated by- 

Kum. Rashmi A Suvarna

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....